ಚಿನ್ಮಯ ವಿಶ್ವತತ್ತ್ವ -
ಪ್ರಪಂಚಕ್ಕೆ ಏಕಮಾತ್ರ ಕಾರಣವಾದ ಪರತತ್ತ್ವ ಸ್ವರೂಪವನ್ನು ಕುರಿತು ಇರುವ ಅನೇಕ ವಾದಗಳಲ್ಲಿ ಒಂದು. ವಿಶ್ವಕ್ಕೆ ಮೂಲಭೂತವಾದ ವಸ್ತು ತರ್ಕಬದ್ಧವಾದ ಮಹಾ ಚೈತನ್ಯ ಎಂದು ಈ ವಾದ (ಪ್ಯಾನ್‍ಲಾಜಿಸಂ) ಹೇಳುತ್ತದೆ. ವಿಚಾರಗಮ್ಯವಾದುದು ಮಾತ್ರ ವಾಸ್ತವಿಕ. ಚೈತನ್ಯ ತಾಕಿ ರೀತಿಯಲ್ಲಿ ಅಭಿವ್ಯಕ್ತಿ ಹೊಂದುತ್ತದೆ. ಯುಕ್ತವಾದದ್ದು ಸತ್ಯ, ಸತ್ಯವಾದದ್ದು ಯುಕ್ತ ಎಂದು ಹೇಳಿ ಹೆಗಲ್ ಈ ವಾದವನ್ನು ಸಮರ್ಥಿಸುತ್ತಾನೆ.
(ನೋಡಿ- ಆಧುನಿಕ-ಪಾಶ್ಚಾತ್ಯತತ್ತ್ವದ-ಮುನ್ನಡೆ)						(ಎಸ್.ಎಸ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ